ಶಿವಮೊಗ್ಗ: ಎರಡು ಸಾಲದ ಕಂತುಗಳನ್ನು ಪಾವತಿಸದ ಕಾರಣಕ್ಕೆ ಕಾನೂನು ಬಾಹಿರವಾಗಿ ಜೆಸಿಬಿಯನ್ನು ವಶಕ್ಕೆ ಪಡೆದು ಹರಾಜು ಮಾಡಿದ ಎಚ್‌ಡಿಬಿ ಫೈನಾನ್ಸಿಯಲ್ ಸರ್ವಿಸ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 2.10 ಲಕ್ಷ ರೂ. ದಂಡ ವಿಧಿಸಿ ಇತ್ತೀಚೆಗೆ ಆದೇಶ ನೀಡಿದೆ.
ಶಿವಮೊಗ್ಗ ತಾಲೂಕು ಗೊಂದಿಚಟ್ನಹಳ್ಳಿ ಗ್ರಾಮದ ನಾಗರಾಜ ಅವರು ಎಚ್‌ಡಿಬಿ ಫೈನಾನ್ಸಿಯಲ್ ಸರ್ವಿಸ್‌ನಲ್ಲಿ ಜೆಸಿಬಿ ಖರೀದಿಗೆ 31,65,625 ರೂ. ಸಾಲ ಪಡೆದಿದ್ದರು. 60 ಕಂತುಗಳ ಸಾಲವನ್ನು ನಿರಂತರವಾಗಿ ಪಾವತಿ ಮಾಡಿಕೊಂಡು ಬಂದಿದ್ದ ನಾಗರಾಜು ಅವರು ಎರಡು ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದರು. ವೈಯಕ್ತಿಕ ಕಾರಣಗಳಿಂದ 2 ಇಎಂಐಗಳನ್ನು ಪಾವತಿಸಲು ಸಾಧ್ಯವಾಗದೇ ಅಕೋಬ್ಬರ್ ಅಂತ್ಯದೊಳಗೆ ಪಾವತಿಸುವುದಾಗಿ ಫೈನಾನ್ಸಿಯಲ್
ಸಂಸ್ಥೆಯ ಗಮನಕ್ಕೂ ತಂದಿದ್ದರು.
ಆದರೂ, ಫೈನಾನ್ಸಿಯಲ್ ಸಂಸ್ಥೆ ಅಧಿಕಾರಿಗಳು ಮತ್ತು ಅವರ ಏಜೆಂಟರು 2024ನೇ ಅಕ್ಟೋಬರ್ 14ರಂದು ಶಿವಮೊಗ್ಗ ನಗರದಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿಯನ್ನು ವಶಕ್ಕೆ ಪಡೆದಿದ್ದರು. ನಾಗರಾಜ ಅವರು ಕಚೇರಿಗೆ ತೆರಳಿ 50 ಸಾವಿರ ಪಾವತಿಸಿ ವಾಹನ ಬಿಟ್ಟು ಕೊಡುವಂತೆ ಕೇಳಿದರೂ ಕೊಟ್ಟಿರಲಿಲ್ಲ. ಅದಾಗಿ ಎರಡೇ ತಿಂಗಳಲ್ಲಿ ಎಚ್‌ಡಿಬಿ ಸಂಸ್ಥೆಯವರು ಜೆಸಿಬಿಯನ್ನು ಹರಾಜು ಮೂಲಕ ಮಾರಾಟ ಮಾಡಿದ್ದರು. ಈ ಸಂಬಂಧ ಫೈನಾನ್ಸಿಯಲ್ ಸಂಸ್ಥೆಯ ವಿರುದ್ಧ ನಾಗರಾಜು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.