ನವದೆಹಲಿ: ಕ್ರಿಕೆಟ್‌ನಲ್ಲಿ ಈಗ ಕ್ರೀಡೆಯಾಗಿ ಏನೂ ಉಳಿದಿಲ್ಲ. ಈಗ ಎಲ್ಲವೂ ಉದ್ಯಮವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಜಬಲ್ಪುರ ವಿಭಾಗವನ್ನು ಕ್ರಿಕೆಟ್ ಸಂಸ್ಥೆಯಾಗಿ ಮಾಡುವ ವಿಚಾರದಲ್ಲಿ ಮಧ್ಯ ಪ್ರದೇಶ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಪ್ತಾ ಅವರ ಜಂಟಿ ಪೀಠ ಮೇಲಿನಂತೆ ಅಭಿಪ್ರಾಯ ಪಟ್ಟಿದೆ.
‘ನಾವು ಈಗ ಕ್ರಿಕೆಟ್ ಆಡುತ್ತಿದ್ದೇವೆ. ಕ್ರಿಕೆಟ್‌ಗೇ ಸಂಬಂಧಿಸಿದ 3-4 ಪ್ರಕರಣಗಳಿವೆ. ಇದು 2ನೇ ಸುತ್ತು. ಇವತ್ತು ಇನ್ನೆಷ್ಟು ಟೆಸ್ಟ್ ಆಡುತ್ತೀರಿ’ ಎಂದು ಅರ್ಜಿ ದಾರರ ಪರ ವಕೀಲರನ್ನು ಪ್ರಶ್ನಿಸಿತು. ‘ಕ್ರಿಕೆಟ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ವಾಲಿಬಾಲ್ ಸಹವಾಸದಿಂದ ದೂರವಿರಲು ಕೋರ್ಟ್‌ಗೆ ಇದು ಸೂಕ್ತ ಸಮಯ’ ಎಂದು ಹೇಳಿತು.