ರಾಯಚೂರು: ಇಡೀ ಕಾಂಗ್ರೆಸ್ ಪಕ್ಷ ಹಾಗೂ ದೇಶದ ಒರಿಜಿನಲ್ ಹಿಂದುಗಳು ಪ್ರಿಯಾಂಕ ಖರ್ಗೆಯವರ ಜೊತೆಗಿದ್ದು, ಇಂತಹ ಬೆದರಿಕೆಗಳಿಗೆ ಹೆದರೊಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್ ಚಟುವಟಿಕೆ ಬ್ಯಾನ್ ಮಾಡುವ ವಿಚಾರ ಕುರಿತು ಸಿಎಂಗೆ ಪತ್ರ ಬರೆದ ಹಿನ್ನೆಲೆ ಸಚಿವ ಪ್ರಿಯಾಂಕ್ ಖರ್ಗೆಗೆ ಬಂದಿರುವ ಬೆದರಿಕೆ ಕರೆಗಳಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬೆದರಿಕೆ ಕರೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಹೆದರಬೇಕಿಲ್ಲ. ದೇಶದ ಎಲ್ಲಾ ಒರಿಜಿನಲ್ ಹಿಂದುಗಳು ಅವರ ಜೊತೆಗೆ ಇದ್ದಾರೆ. ಐಡಿಯಾಲಜಿಕಲ್ ಡಿಫರನ್ಸ್ ಇರಬಹುದು. ಈ ರೀತಿ ಬೆದರಿಕೆ ಹಾಕೋದಕ್ಕೆ ಅರ್ಥ ಇರಲ್ಲ. ಯಾರು ಮಾಡಿದ್ದಾರೆ ಗೊತ್ತಿಲ್ಲ. ಈ ಆರ್‌ಎಸ್‌ಎಸ್ ಅನ್ನು ಎರಡು-ಮೂರು ಬಾರಿ ಬ್ಯಾನ್ ಮಾಡಿದವರು ಯಾರು? ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟ್ಯಾಚ್ಯು ಮಾಡಿದ್ದಾರಲ್ಲ ಅವರೇ ಬ್ಯಾನ್ ಮಾಡಿದ್ದು. ಯಾಕ್ ಬ್ಯಾನ್ ಮಾಡಿದ್ದು ಅಂತ ಕೇಳಬೇಕು ಎಂದು ತಿರುಗೇಟು ನೀಡಿದರು.