ಬೆಂಗಳೂರು: ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಿದ ಪ್ರಕರಣ ಸಂಬಂಧ ಬಿಜೆಪಿ ಮಾಜಿ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ರಾಜ್ಯ ಭೂಕಬಳಿಕೆ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
ರೈತರಿಂದ ಕ್ರಯಕ್ಕೆ ಪಡೆದ ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣ ಇದಾಗಿದೆ. ಮೈಸೂರಿನ ವೈದ್ಯೆ ಡಾ. ಕಾವ್ಯಶ್ರೀ ಅವರ ದೂರಿನ ಅನ್ವಯ ಈ ಆದೇಶ ಹೊರಡಿಸಲಾಗಿದೆ
ಪ್ರಕರಣವೇನು?: ಬೆಂಗಳೂರಿನ ಕೆಂಗೇರಿ ಹೋಬಳಿ ವ್ಯಾಪ್ತಿಯ ರಾಮಸಂದ್ರ ಗ್ರಾಮದ ಸರ್ವೇ 100/2ರಲ್ಲಿನ ಸ್ಥಳೀಯ 4 ಎಕರೆ 30 ಗುಂಟೆ ಕೃಷಿ ಜಮೀನನ್ನು ರೈತರಿಂದ ಖರೀದಿಸಿದ್ದರು. ನಂತರ ಅದನ್ನು ಭೂ ಪರಿವರ್ತನೆ ಮಾಡದೆ ನಿವೇಶನಗಳನ್ನು ವಿಂಗಡಿಸಿ, ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅಶ್ವತ್ ನಾರಾಯಣ ವಿರುದ್ಧ ಮೈಸೂರಿನ ಡಾ। ಕಾವ್ಯಶ್ರೀ ಎಂಬುವವರು ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯ ಈ ಆದೇಶ ಮಾಡಿದೆ.