ಸುದ್ದಿ

ಇ.ಡಿ.ಅಧಿಕಾರಿ ಎಂದು ಹೇಳಿ ಉದ್ಯಮಿ ಮನೆ ದರೋಡೆ; ಎಎಸ್ಐ ಅಮಾನತು

Share It

ತ್ರಿಶೂರ್: ಇ.ಡಿ. ಅಧಿಕಾರಿ ಎಂದು ಹೇಳಿಕೊಂಡು ಬಂಟ್ವಾಳದ ಉದ್ಯಮಿಯೊಬ್ಬರ ಮನೆಯನ್ನು ದರೋಡೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಪೊಲೀಸರು ಸೋಮವಾರ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ನನ್ನು ಬಂಧಿಸಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ತ್ರಿಶೂರ್‌ನ ಕೊಡುಂಗಲ್ಲೂರು ಠಾಣೆಯ ಎಎಸ್‌ಐ ಶಹೀರ್‌ಬಾಬು (49) ಅಮಾನತುಗೊಂಡ ಅಧಿಕಾರಿ. ಜ.3 ರಂದು ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಮನೆ ಮೇಲೆ ದಾಳಿ ನಡೆಸಿ ದರೋಡೆ ನಡೆಸಲಾಗಿತ್ತು. ತನಿಖೆ ವೇಳೆ ಪ್ರಕರಣದ ರೂವಾರಿ ಎಎಸ್ಐ ಶಹೀರ್‌ಬಾಬು ಎಂಬುದು ಪತ್ತೆಯಾಗಿತ್ತು. ಆತ ನಕಲಿ ತಂಡವನ್ನು ಕಟ್ಟಿದ್ದು, ಆತನ ಯೋಜನೆಯಂತೆ ದರೋಡೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಎಎಸ್ಐ ಶಹೀರ್ ಸೇರಿ ನಾಲ್ವರನ್ನು ವಿಟ್ಲ ಪೊಲೀಸರು ಬಂಧಿಸಿದ್ದರು.


Share It

You cannot copy content of this page