ಸುದ್ದಿ

ಮತ್ತೆ ಕಿರುತೆರೆಯ ಮೂಲಕ ಬಣ್ಣ ಹಚ್ವಿದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ !

Share It

ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ರೂಪದರ್ಶಿ, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಈಗ ಮತ್ತೆ ಬಣ್ಣ ಹಚ್ಚುವ ಮೂಲಕ ಕಿರುತೆರೆಯಲ್ಲಿ ತುಳಸಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ1998ರಲ್ಲಿ ಮಿಸ್ ಇಂಡಿಯಾ ಸ್ಪರ್ಧಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ಬಳಿಕ ಸ್ಮೃತಿ ಇರಾನಿ ಅವರು 2000ರಲ್ಲಿ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’ ಎನ್ನುವ ಧಾರಾವಾಹಿಯಲ್ಲಿ ಸ್ಮೃತಿ ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ತುಳಸಿ ವಿರಾನಿ ಪಾತ್ರ ಅಪಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ನಂತರ ಅವರು ಅನೇಕ ಇತರ ಟಿವಿ ಕಾರ್ಯಕ್ರಮಗಳನ್ನು ಮಾಡಿದರು. ಸತತ 7 ವರ್ಷ ಈ ಧಾರಾವಾಹಿಯೇ ನಂ.1 ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

ಇದೀಗ ಮತ್ತೆ ಸ್ಮತಿ ಸೀರಿಯಲ್ ಜಗತ್ತಿಗೆ ಕಂಬ್ಯಾಕ್ ಮಾಡಿದ್ದಾರೆ. ‘ಕ್ಯೂಂಕಿ ಸಾಸ್‌ ಬಿ ಕಭಿ ಬಹು ದಿ ಸೀಸನ್ -2 ಮೂಲಕ ಸ್ಮೃತಿ ಕಿರುತೆರೆಯಲ್ಲಿ ಬಣ್ಷ ಹಚ್ವಿದ್ದಾರೆ. ಹೀಗಾಗಿ ಕಿರುತೆರೆ ಲೋಕದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸ್ಮೃತಿ ಅವರನ್ನು ತುಳಸಿ ವೀರ್ವಾನಿ ಪಾತ್ರದಲ್ಲಿ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಈ ನಡುವೆ ಸ್ಮೃತಿ ಇರಾನಿ ಪಾತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಸಾಂಪ್ರದಾಯಿಕ ಗೃಹಿಣಿಯ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದು, ಕೆಂಪು ಬಿಂದಿ, ಕಪ್ಪು ಮಣಿಗಳ ಮಂಗಳಸೂತ್ರದಿಂದ ಲೇಯ‌ರ್ ಮಾಡಲಾದ ಆಭರಣಗಳಲ್ಲಿ ಅವರು ಮಿಂಚಿದ್ದಾರೆ.


Share It

You cannot copy content of this page