ಸುದ್ದಿ

ಕರ್ನಾಟಕ ವಿವಿ ಕುಲಪತಿ ಹುದ್ದೆ ನೇಮಕಾತಿ ಆದೇಶ ಪ್ರಶ್ನಿಸಿ ರಿಟ್ ಅರ್ಜಿ: ಆದೇಶಕ್ಕೆ ತಡೆಯಾಜ್ಞೆ

Share It

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಕವಿವಿ ಕುಲಪತಿಗಳ ನೇಮಕ ಕ್ರಮ ಸರಿಯಾಗಿಲ್ಲ ಎಂದು ಕವಿವಿ ಹಿರಿಯ ಪ್ರಾಧ್ಯಾಪಕ ಡಾ| ಮಹಾದೇವಪ್ಪ ಕರಿದುರಗನವರ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ಪೀಠವು ಈ ವಿಚಾರವಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಂತೆ ಸೋಮವಾರ ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಜು.23ಕ್ಕೆ ಮುಂದೂಡಿದೆ.

ಕವಿವಿ ಕುಲಪತಿ ಹುದ್ದೆ 10 ತಿಂಗಳಿಂದ ಭರ್ತಿಯಾಗಿರಲಿಲ್ಲ. 2 ದಿನದ ಹಿಂದಷ್ಟೇ ಮಂಗಳೂರು ವಿವಿ ಹಿರಿಯ ಪ್ರಾಧ್ಯಾಪಕ ಡಾ| ಎ.ಎಂ.ಖಾನ್ ಅವರನ್ನು ಕಾಯಂ ಕುಲಪತಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅದರಂತೆ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರಾದರೂ ಈಗ ಕಾನೂನು ತೊಡಕು ಎದುರಾಗಿದೆ. ರಿಟ್ ಅರ್ಜಿ ಸಲ್ಲಿಸಿರುವ ಪ್ರಾಧ್ಯಾಪಕ ಡಾ.ಮಹಾದೇವಪ್ಪ ಕರಿದುರಗನವರ ಅವರೂ ಕುಲಪತಿ ಹುದ್ದೆ ಆಕಾಂಕ್ಷಿ ಆಗಿದ್ದಾರೆ.


Share It

You cannot copy content of this page