ರಾಮನಗರ: ನಿಮ್ಮ ಆಟ ನನಗೆ ಗೊತ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ. ನೀವು ಮುಂದೆ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ ಎಂದು ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಹೋಬಳಿ ಬೈರಮಂಗಲ ಮತ್ತು ಕಂಚುಗಾರನ ಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯನ್ನು ಬೆಂಬಲಿಸಿ ವರ್ಚ್‌ಯುವಲ್ ಸಭೆ ಮೂಲಕ ರೈತರನ್ನು ಉದ್ದೇಶಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು
ಡಿ.ಕೆ.ಶಿವಕುಮಾರ್ ನಮ್ಮ ಕುಟುಂಬದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಆದರೆ, ಅವರು ಬಿಲ್ಲು ಕೆಂಪನಹಳ್ಳಿಯಲ್ಲಿ ಒಬ್ಬ ವ್ಯಕ್ತಿಯ ಭೂಮಿ ಲಪಟಾಯಿಸಿ ಬಿಲ್ಡಿಂಗ್ ಕಟ್ಟಿಕೊಂಡರು. ನಿವೃತ್ತ ಯೋಧನ ಜಮೀನು ಕಬಳಿಸಿದರು. ಇವರಿಗೆ ದೇವೇಗೌಡರು ಹಾಗೂ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.