ಸುದ್ದಿ

ಪೊಲೀಸರು ಕೇಸ್ ದಾಖಲಿಸಲು ನಿರಾಕರಿಸಿದರೆ ದೂರುದಾರ ನೇರವಾಗಿ ಕೋಟ್೯ಗೆ ಅರ್ಜಿ ಸಲ್ಲಿಸಬಹುದು: ಹೈಕೋರ್ಟ್

Share It

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಳ್ಳಲು ನಿರಾಕರಿಸಿದರೆ ದೂರುದಾರರು ಬಿಎನ್ಎಸ್ ಕಾಯ್ದೆಯಡಿ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ಹೇಳಿದೆ.

ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ಸಹೋದರನಿಂದ ವಂಚನೆಯಾಗಿದೆ ಎಂದು ನಗರದ ನಿವಾಸಿ ಬಿ.ಎಚ್. ನಾಗರಾಜು ಎಂಬುವರು ನೀಡಿದ್ದ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ.ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಮೇಲಿನಂತೆ ಆದೇಶಿಸಿದೆ.

ಪೊಲೀಸ್ ಠಾಣೆಯಲ್ಲಿ ದೂರು ತಿರಸ್ಕರಿಸಿದರೆ ದೂರುದಾರರು ನೇರವಾಗಿ ಹೈಕೋರ್ಟ್ ಗೆ ಅರ್ಜಿಸಲ್ಲಿಸಬಹುದಾಗಿದೆ. ಒಂದು ವೇಳೆ ಉನ್ನತ ಅಧಿಕಾರಿಯೂ ಆ ದೂರು ತಿರಸ್ಕರಿಸಿದರೆ, ಆ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಎದುರು ಖಾಸಗಿ ದೂರು ದಾಖಲಿಸಲು ಕೂಡ ನಿಯಮಗಳಲ್ಲಿ ಅವಕಾಶವಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಇದೇ ವೇಳೆ ಅರ್ಜಿದಾರ ಬಿ.ಎಚ್.ನಾಗರಾಜು ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್ ಐಆರ್‌ದಾಖಲಿಸಲು ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.


Share It

You cannot copy content of this page