ಸುದ್ದಿ

ಕೋಟಿ ಹಣಕ್ಕಾಗಿ ಈ ದಂಪತಿ ಮಾಡಿದ  ಐನಾತಿ ಪ್ಲಾನ್ ಗೆ ಪೊಲೀಸರೇ ಶಾಕ್ !

Share It

ಹಾಸನ: ಸಾಲ ತೀರಿಸೋಕೆ ಈ ಐನಾತಿ ದಂಪತಿ ಮಾಡಿದ ದುಷ್ಕೃತ್ಯ ಕೇಳುದ್ರೆ ಎಂಥವರು ಒಮ್ಮೆ ಶಾಕ್ ಆಗ್ತಾರೆ ! ಹೌದು.. ಕೋಟಿ ಇನ್ಸೂರೆನ್ಸ್ ಹಣಕ್ಕಾಗಿ ಈ ಖತರ್ನಾಕ್ ದಂಪತಿ ಅಮಾಯಕನೊಬ್ಬನನ್ನು ಕೊಂದು ಪೊಲೀಸರ ಕೈಗೆ ತಗಲಾಕಿಕೊಂಡಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತನ್ನನ್ನೆ ಹೋಲುವ ವ್ಯಕ್ತಿಯ ಪರಿಚಯ ಮಾಡಿಕೊಂಡ ಈ ಐನಾತಿ ದಂಪತಿ, ಆತನ್ನು ಆಕ್ಸಿಡೆಂಟ್ ರೀತಿ ಕೊಲೆ ಮಾಡಿ, ನಂತರ ಇನ್ಸೂರೆನ್ಸ್ ಹಣ ಲಪಟಾಯಿಸಲು ಮುಂದಾಗಿದ್ದ ಬೆಂಗಳೂರಿನ ಹೊಸಕೋಟೆ ತಾಲ್ಲೂಕಿನ ಚಿಕ್ಕಕೋಲಿಗದ ಮುನಿಶ್ವಾಮಿಗೌಡ ಮತ್ತು ಆತನ ಪತ್ನಿ ಶಿಲ್ಪಾರಾಣಿ ಈ ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದಾರೆ.

ಕೋಟಿ ಹಣಕ್ಕಾಗಿ ತನ್ನ ಪತಿ ಮುನಿಸ್ವಾಮಿಗೌಡ ಆಕ್ಸಿಡೆಂಟ್‌ನಲ್ಲಿ ಸತ್ತ ಎಂದು ಪತ್ನಿ ಶಿಲ್ಪಾರಾಣಿ ನಾಟಕವಾಡಿದ್ದಾಳೆ. ಇದಕ್ಕಾಗಿ ಮುನಿಸ್ವಾಮಿಗೌಡನನ್ನು ಹೋಲುವ ರೀತಿಯಿದ್ದವನನ್ನು ಶಿಡ್ಲಘಟ್ಟಕ್ಕೆ ಹೋಗೋಣ ಎಂದು ಕರೆದೊಯ್ದಿದ್ದಾರೆ. ಅಲ್ಲಿ ಮುನಿಸ್ವಾಮಿಗೌಡ ಕಾರು ಪಂಕ್ಚ‌ರ್ ಆಗಿದೆ ಟೈರ್ ಬದಲಿಸು ಅಂತ ಅಮಾಯಕನಿಗೆ ಹೇಳಿದ್ದಾನೆ. ಅದರಂತೆ ಜೊತೆಯಲ್ಲಿದ್ದ ಅಮಾಯಕ ವ್ಯಕ್ತಿ ಟೈರ್ ಬದಲಾಯಿಸಲು ಮುಂದಾದಾಗ ಫ್ರೀಪ್ಲ್ಯಾನ್ ಮಾಡಿದಂತೆ ಅಮಾಯಕನ ಮೇಲೆ ಲಾರಿ ಹತ್ತಿಸಿ ಆತನ ಜೀವ ತೆಗೆದಿದ್ದಾರೆ. ನಂತರ ಮುನಿಶ್ವಾಮಿಗೌಡ ಅಮಾಯಕ ಸತ್ತ ನಂತರ ಕಾರು ಬಿಟ್ಟು ಎಸ್ಕೆಪ್ ಆಗಿದ್ದಾನೆ.

ಬಳಿಕ ಜಿಲ್ಲಾಸ್ಪತ್ರೆಗೆ ಮೃತ ಅಮಾಯಕನ ಬಾಡಿ ಶಿಫ್ಟ್ ಮಾಡಲಾಗಿತ್ತು. ಮುನಿಶ್ವಾಮಿಗೌಡನ ಪತ್ನಿ ಶಿಲ್ಪಾರಾಣಿ ನನ್ನ ಪತಿ ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡು ನಾಟಕ ಶುರುಮಾಡಿದ್ದಾಳೆ. ಶಿಲ್ಪಾರಾಣಿಗೆ ಮೃತದೇಹವನ್ನು ಪೊಲೀಸರು ಕೊಟ್ಟಿದ್ದಾರೆ. ಎಲ್ಲವೂ ದಂಪತಿ ಅಂದುಕೊಂಡಂತೆ ನಡೆದಿದೆ.

ಚಿಕ್ಕಕೋಲಿಗದಲ್ಲಿ ಶಿಲ್ಪಾರಾಣಿ ಅಮಾಯಕನ ಶವವನ್ನು ಅಂತ್ಯಸಂಸ್ಕಾರ ಮಾಡಿ ಬಂದಿದ್ದಾಳೆ. ಈ ವೇಳೆ ಮುನಿಶ್ವಾಮಿಗೌಡನ ಪತ್ನಿ ಶಿಲ್ಪಾರಾಣಿ ಸಂಬಂಧಿಕರೆಲ್ಲಾ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ. ಮೂರ್ನಾಲ್ಕು ದಿನದ ನಂತರ ಮುನಿಶ್ವಾಮಿಗೌಡ ತನ್ನ ಸಂಬಂಧಿ ಪೊಲೀಸ್‌ ಇನ್ಸ್ಪೆಕ್ಟರ್ ಶಿಡ್ಲಘಟ್ಟದ ಶ್ರೀನಿವಾಸ್‌ ಎದುರು ಪ್ರತ್ಯಕ್ಷನಾಗಿದ್ದಾನೆ. ಸತ್ತವನು ಎದ್ದು ಬಂದನಾ ಅಂತ ಪೊಲೀಸ್‌ ಇನ್ಸ್ಪೆಕ್ಟರ್ ಶ್ರೀನಿವಾಸ್ ಶಾಕ್ ಆಗಿದ್ದಾರೆ. ನಂತರ ಪೊಲೀಸ್‌ ಇನ್ಸ್ಪೆಕ್ಟರ್ ಶ್ರೀನಿವಾಸ್ ತನ್ನ ಸಂಬಂಧಿ ಎಂಬ ಕಾರಣಕ್ಕೆ ಮುನಿಶ್ವಾಮಿಗೌಡ ತನ್ನ ನಾಟಕದ ಬಗ್ಗೆ ಎಲ್ಲವನ್ನೂ ಹೇಳಿಕೊಂಡಿದ್ದಾನೆ.
ಆಗ ಶಿಡ್ಲಘಟ್ಟ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಸಂಬಂಧಿಯಾದರಯ ವಿಷಯವನ್ನು ಗಂಡಸಿ ಪೊಲೀಸರಿಗೆ ಮುಟ್ಟಿಸಿದ್ದಾರೆ.

ನಂತರ ಮುನಿಸ್ವಾಮಿಗೌಡನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಗಂಡಸಿ ಪೊಲೀಸರ ಮುಂದೆ ಆರೋಪಿ ಮುನಿಶ್ವಾಮಿಗೌಡ ಮಾಡಿದ ಸಾಲ ತೀರಿಸಲು ಅಮಾಯಕನನ್ನು ಕೊಲೆ ಮಾಡಿ ಈ ಐನಾತಿ ನಾಟಕ ಆಡಿರುವುದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.


Share It

You cannot copy content of this page