ಬೆಂಗಳೂರು: ಹಾಸನದ ಅರಕಲಗೂಡು ಪೊಲೀಸ್ ಠಾಣೆಗೆ ಕರೆ ಮಾಡಿ ರಕ್ಷಣೆ ಕೋರಿದ ಮಹಿಳೆ ಮೇಲೆ ದರ್ಪ ತೋರಿದ ಎಎಸ್‌ಐ ವಿರುದ್ಧ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ರಾಜ್ಯ ಮಹಿಳಾ ಆಯೋಗ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ.
ಪತಿಯ ಮನೆಯವರು ದೌರ್ಜನ್ಯ ನಡೆಸುತ್ತಿದ್ದಾರೆಂದು ಮಹಿಳೆಯೊಬ್ಬರು ಸಹಾಯವಾಣಿಗೆ ಕರೆ ಮಾಡಿದ್ದಾರೆ.ಸ್ಥಳಕ್ಕೆ ತೆರಳಿದ ಅರಕಲಗೂಡು ಪೊಲೀಸ್ ಠಾಣೆ ಎಎಸ್‌ಐ ದೇವರಾಜ್ ಸಾಂತ್ವನ ಹೇಳುವ ಬದಲು ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ತೋರಿದ್ದಾರೆ. ವಿಡಿಯೋ ಜಾಲತಾಣ ಗಳಲ್ಲಿ ವೈರಲ್ ಹಿನ್ನೆಲೆ ಎಐಎಸ್‌ಐ ಮೇಲೆ ಕ್ರಮ ಕೈಗೊಂಡು ವರದಿ ನೀಡವಂತೆ ರಾಜ್ಯ ಮಹಿಳಾ ಆಯೋಗ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಸೂಚನೆ ನೀಡಿದೆ.