ಸುದ್ದಿ

ಹೃದಯಾಘಾತ; ಶಾಲೆಯಲ್ಲೆ ಕುಸಿದು ಬಿದ್ದು 8 ವರ್ಷದ ಬಾಲಕಿ ಸಾವು

ಚಾಮರಾಜನಗರ: 3ನೇ ತರಗತಿ ಓದುತ್ತಿದ್ದ 8 ವರ್ಷದ ಬಾಲಕಿ ಶಾಲಾ ಕೊಠಡಿಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಬದನಗುಪ್ಪೆಯ ಗ್ರಾಮದ ಲಿಂಗರಾಜು, ಶೃತಿ ದಂಪತಿಯ […]

ಸುದ್ದಿ

ಶಾಲಾ ಪ್ರವೇಶಾತಿಗೆ ಹಿಂದಿನ ಸಂಸ್ಥೆಗಳ ಟಿಸಿ ತರುವಂತೆ ಒತ್ತಾಯಿಸುವಂತಿಲ್ಲ; ಸುತ್ತೋಲೆ ಹೊರಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಶಾಲಾ ಪ್ರವೇಶಾತಿಗೆ ಹಿಂದೆ ಓದಿದ ಶಿಕ್ಷಣ ಸಂಸ್ಥೆಗಳಿಂದ ವರ್ಗಾವಣೆ ಪ್ರಮಾಣಪತ್ರ(Transfer certificate) ತರುವಂತೆ ಒತ್ತಾಯಿಸಬಾರದು ಈ ಸಂಬಂಧ ರಾಜ್ಯದ ಎಲ್ಲಾ ಶಾಲಾ ಆಡಳಿತ ಮಂಡಳಿಗೆ ಸುತ್ತೋಲೆ ಹೊರಡಿಸುವಂತೆ ಮದ್ರಾಸ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. […]

ಸುದ್ದಿ

ಹಿಂದೂ,ಕ್ರೈಸ್ತರಿಂದ ಮಸೀದಿಗೆ ಕಾಯಕಲ್ಪ; ಭಾವೈಕ್ಯತೆಗೆ ಸಾಕ್ಷಿಯಾದ ಕೊಡಗಿನ ಮಸೀದಿ!

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಎರಡು ಶತಮಾನಗಳಿಗೂ ಹೆಚ್ವು ಪುರಾತನ ಮಸೀದಿಯೊಂದು ಶಿಥಿಲಾವಸ್ಥೆಯಲ್ಲಿದ್ದಾಗ, ಅದರ ಅಭಿವೃದ್ಧಿಗೆ ಮುಸ್ಲಿಮರೊಂದಿಗೆ ಹಿಂದೂಗಳು ಮತ್ತು ಕ್ರೈಸ್ತರು ನೆರವಾಗುವ ಮೂಲಕ ಸರ್ವಧರ್ಮ ಸಮಾನತೆಯ ಸಂದೇಶ ಸಾರಿದ್ದಾರೆ. ಧರ್ಮ ಭೇದದ ಭಾವವಿಲ್ಲದೇ […]

ಸುದ್ದಿ

ಮಗನ ವಿರುದ್ಧ ತಾಯಿ ದೂರು; ಠಾಣೆಗೆ ಕರೆದೊಯ್ಯಲು ಬಂದ ಎಎಸ್ಐ ಜೊತೆ ಆರೋಪಿ ಹೊಡೆದಾಟ

ನಾಗಮಂಗಲ: ತಾಯಿಯೊಬ್ಬರು ಮಗನ ವಿರುದ್ಧ ಕಿರುಕುಳ ನೀಡುತ್ತಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಆತನನ್ನು ಠಾಣೆಗೆ ಕರೆದೊಯ್ಯಲು ಬಂದ ಎ.ಎಸ್.ಐ ಜೊತೆಗೆ ಆರೋಪಿಯು ಹೊಡೆದಾಡಿಕೊಂಡಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ. ಪಟ್ಟಣದ ಟಿ.ಬಿ.ವೃತ್ತದ ಬಳಿಯ ನ್ಯಾಯಾಲಯದ […]

ಸುದ್ದಿ

ಮಕ್ಕಳು ಅಗತ್ಯ ಆರೈಕೆ,ಷರತ್ತುಗಳನ್ನು ಪೂರೈಸದೆ ಹೋದಲ್ಲಿ ಪೋಷಕರು ಗಿಫ್ಟ್ ಡೀಡ್ ರದ್ದುಕೋರಬಹುದು: ಹೈಕೋರ್ಟ್

ಬೆಂಗಳೂರು: ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007ರ ಕಲಂ 16ರಡಿ ಆಸ್ತಿ ವರ್ಗಾವಣೆ ಹಕ್ಕು ರದ್ದುಪಡಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವ ಅಧಿಕಾರ ಪೋಷಕರಿಗೆ ಮಾತ್ರ ಇದೆಯೇ ಹೊರತು ಮಕ್ಕಳಿಗಲ್ಲ’ ಎಂದು […]

ಸುದ್ದಿ

40 ಸಾವಿರ ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಪೊಲೀಸರಿಂದ ಡಿಡಿಪಿಐ ಮತ್ತು ಕಚೇರಿ ಅಧೀಕ್ಷಕ ಬಂಧನ

ಹಾಸನ: ಶಿಕ್ಷಕಿಯೊಬ್ಬರ ವರ್ಗಾವಣೆ ಮಾಡಲು ₹40ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಎಚ್.ಕೆ. ಪಾಂಡು ಹಾಗೂ ಕಚೇರಿ ಅಧೀಕ್ಷಕ ಎ.ಎಸ್. ವೇಣುಗೋಪಾಲ್ ಶನಿವಾರ ತಮ್ಮ ಕಚೇರಿಯಲ್ಲೇ ಲೋಕಾಯುಕ್ತ […]

ಸುದ್ದಿ

KSRTC,BMTC ಬಸ್‌ ಪ್ರಯಾಣ ದರ ಹೆಚ್ಚಳ ಜಾರಿ

ಬೆಂಗಳೂರು:ಸಾರಿಗೆ ಬಸ್‌ಗಳ ಟಿಕೆಟ್‌ ದರವನ್ನು ಶೇ 15ರಷ್ಟು ಏರಿಸಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿತ್ತು. ಅದರಂತೆ ಜ.4ರ ಮಧ್ಯರಾತ್ರಿ 12 ಗಂಟೆಯ ಬಳಿಕ ಅಧಿಕೃತವಾಗಿ ಜಾರಿಯಾಗಿದೆ. ಬೆಂಗಳೂರು ನಗರದಲ್ಲಿ ವಿಮಾನ […]

ಸಿನಿಮಾ

ತನ್ನೂರ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಮಾದರಿಯಾದ ನಟ ಡಾಲಿ ಧನಂಜಯ್

‘ಬಡವರ ಮಕ್ಕಳು ಬೆಳೀಬೇಕು ಅಂದ ಡಾಲಿ ಈಗ ಸರ್ಕಾರಿ ಶಾಲೆಗಳು ಉಳೀಬೇಕು ಅನ್ನುವ ಸಂಕಲ್ಪ ಮಾಡಿದ್ದಾರೆ.’ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್, ವೈದ್ಯೆ ಧನ್ಯತಾ ಅವರ ಜೊತೆಯಲ್ಲಿ ಫೆ.16ರಂದು ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಮದುವೆ […]

ಸುದ್ದಿ

ರಾಜಕೀಯ ತಜ್ಞ, ಲೇಖಕ ಪ್ರೊ.ಮುಜಾಫ‌ರ್ ಅಸ್ಸಾದಿ ನಿಧನ: ಸಿ.ಎಂ.ಸಿದ್ದರಾಮಯ್ಯ ಸಂತಾಪ

ಬೆಂಗಳೂರು: ಚಿಂತಕ, ಲೇಖಕ, ರಾಜಕೀಯ ತಜ್ಞ ಪ್ರೊ.ಮುಜಾಫ‌ರ್ ಅಸ್ಸಾದಿ (63) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ನಿಧನರಾದರು. ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮೈಸೂರಿನ ಸರಸ್ವತಿಪುರಂನ ಮುಸ್ಲಿಂ ವಿದ್ಯಾರ್ಥಿನಿಲಯದಲ್ಲಿ ವ್ಯವಸ್ಥೆ […]

ಸುದ್ದಿ

ಪೊಲೀಸ್ ಠಾಣೆಯ ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ: – ಹೈಕೋರ್ಟ್

ಪ್ರತಿ ಪೊಲೀಸ್‌ ಠಾಣೆಯ ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ರೆಕಾರ್ಡಿಂಗ್‌ ಜತೆಗೆ ಅಳವಡಿಕೆಯಾಗಿರಲೇಬೇಕು ಎಂದು ಮಧ್ಯಪ್ರದೇಶದ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ. ಪೊಲೀಸರಿಂದ ಮಾರಕವಾಗಿ ಥಳಿತಕ್ಕೊಳಗಾದ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. […]

ಸುದ್ದಿ

ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ; ಡಿವೈಎಸ್ಪಿ ಎ.ರಾಮಚಂದ್ರಪ್ಪ ಸಸ್ಪೆಂಡ್

ತುಮಕೂರು: ದೂರು ನೀಡಲು ಬಂದಿದ್ದ ಮಹಿಳೆಯೊಬ್ಬರ ಮೇಲೆ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪ ಎದುರಿಸುತ್ತಿದ್ದ ತುಮಕೂರು ಜಿಲ್ಲೆ, ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ಎ.ರಾಮಚಂದ್ರಪ್ಪ ಅವರನ್ನು ಶುಕ್ರವಾರ ಅಮಾನತು ಮಾಡಲಾಗಿದೆ. ಲೈಂಗಿಕ ದೌರ್ಜನ್ಯ ನಡೆಸಿದ […]

ಸುದ್ದಿ

ವಿಜಯೇಂದ್ರ ಸ್ಥಾನಕ್ಕೆ ಬಂತಾ ಕುತ್ತು..!?ಹೊಸವರ್ಷದ ದಿನವೂ ದೆಹಲಿ ರೌಂಡ್ಸ್‌ನಲ್ಲಿದ್ದಿದ್ದೇಕೆ..?

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೊಸ ವರ್ಷ ಅಂತಾನೂ ನೋಡದೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೆಹಲಿ ಸುತ್ತಿ ಬಂದಿದ್ದಾರೆ. ಅವರು ಬೆಂಗಳೂರಿಗೆ ವಾಪಸ್ ಆಗ್ತಿದ್ದಾಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ’ರಾಜ್ಯದಲ್ಲಿ ಚುನಾವಣೆ […]

ಸುದ್ದಿ

ಬ್ಲಿಂಕಿಟ್‌ನಿಂದ ಆರೋಗ್ಯ ಸೇವೆ; ಕರೆ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಆಂಬುಲೆನ್ಸ್

ನವದೆಹಲಿ: ಪ್ರತಿಷ್ಠಿತ ಆನ್‌ಲೈನ್‌ ಫುಡ್ ಡೆಲಿವರಿ ಸಂಸ್ಥೆ ಬ್ಲಿಂಕಿಟ್ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ಒದಗಿಸಲು ಮುಂದಾಗಿದ್ದು ಕರೆ ಮಾಡಿದರೆ10 ನಿಮಿಷದಲ್ಲಿ ಮನೆ ಬಾಗಿಲಿಗೆ ಆ್ಯಂಬುಲೆನ್ಸ್ ಸೇವೆ ನೀಡುವ ಯೋಜನೆ ಆರಂಭಿಸಿದೆ. ಆರಂಭಿಕವಾಗಿ ಗುರುಗ್ರಾಮ್ […]

ಸುದ್ದಿ

ದೂರು ನೀಡಲು ಬಂದ ಮಹಿಳೆ ಮೇಲೆ ಡಿವೈಎಸ್ಪಿಯಿಂದ ಲೈಂಗಿಕ ದೌರ್ಜನ್ಯ ಯತ್ನ; ವಿಡಿಯೋ ವೈರಲ್ !

ಮಧುಗಿರಿ: ಜಮೀನು ವ್ಯಾಜ್ಯದ ಸಂಬಂಧ ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಚೇರಿಯಲ್ಲೇ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ವಿಡಿಯೋ ಗುರುವಾರ ವೈರಲ್ ಆಗಿದೆ. ಮಧುಗಿರಿ ಡಿವೈಎಸ್ಪಿ ಜಮೀನು ವ್ಯಾಜ್ಯದ […]

ಸುದ್ದಿ

ಮೂರು ವರ್ಷದೊಳಗೆ ಬಿಡಿಎ ಸೈಟಲ್ಲಿ ಮನೆ ಕಟ್ಟದಿದ್ದರೆ ದಂಡ!

ಬೆಂಗಳೂರು: ಸ್ವಂತದೊಂದು ಮನೆ ಕಟ್ಟಿಕೊಳ್ಳಲಿ ಎಂದು ಬಿಡಿಎ ಬಡಾವಣೆಗಳನ್ನು ನಿರ್ಮಾಣ ಮಾಡಿ ಕಡಿಮೆ ದರಕ್ಕೆ ನಿವೇಶನಗಳನ್ನು ಹಂಚಿಕೆ ಮಾಡಿದೆ. ಆದರೆ, ಶ್ರೀಮಂತರು, ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ದಲ್ಲಾಳಿಗಳು ಇವುಗಳನ್ನು ಖರೀದಿಸಿ, ನಂತರ ಹೆಚ್ಚಿನ ದರಕ್ಕೆ […]

ಸುದ್ದಿ

ವಕೀಲರ ನೋಂದಣಿ ಶುಲ್ಕ 25 ಸಾವಿರಕ್ಕೆ ಹೆಚ್ಚಿಸಲು ಕೋರಿ ಸುಪ್ರೀಂ ಮೆಟ್ಟಿಲೇರಿದ ಬಿಸಿಐ

ದೆಹಲಿ: ವಕೀಲರ ಪರಿಷತ್ತುಗಳಲ್ಲಿ ಸಂಗ್ರಹಿಸುತ್ತಿರುವ ವಕೀಲರ ನೋಂದಣಿ ಶುಲ್ಕವನ್ನು 25 ಸಾವಿರ ರೂಪಾಯಿಗೆ ಹೆಚ್ಚಿಸುವಂತೆ ಕೋರಿ ಭಾರತೀಯ ವಕೀಲರ ಪರಿಷತ್ತು(ಬಿಸಿಐ) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆರ್ಥಿಕ ಸಂಕಷ್ಟಗಳನ್ನು ಮುಂದಿಟ್ಟಿರುವ ಬಿಸಿಐ ವಕೀಲರ ನೋಂದಣಿ ಶುಲ್ಕ […]

ಸುದ್ದಿ

ಬಸ್ ನಲ್ಲಿ ತಿಗಣೆ ಕಚ್ಚಿದ್ದಕ್ಕೆ ಅನಾರೋಗ್ಯ: 1 ಲಕ್ಷ ಪರಿಹಾರ ಕೊಡಿಸಿದ ಕೋಟ್೯

ಮಂಗಳೂರು: ಸೀಬರ್ಡ್ ಬಸ್ ನಲ್ಲಿ ಪ್ರಯಾಣಿಸುವಾಗ ತಿಗಣೆ ಕಚ್ಚಿ ಅನಾರೋಗ್ಯಗೊಂಡಿದ್ದಕ್ಕೆ ದೂರುದಾರ ಮಹಿಳೆಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕರ ಕೋರ್ಟ್ ಆದೇಶಿಸಿದೆ. ತಿಗಣೆ ಕಚ್ಚಿದ್ದಕ್ಕೆ ದೂರುದಾರ ಮಹಿಳೆಗೆ ಸಾಕಷ್ಟು ತೊಂದರೆ ಉಂಟಾಗಿದ್ದು, […]

ಸುದ್ದಿ

ಆರ್‌ಟಿಐ ಉಲ್ಲಂಘನೆ: ಪಿಎಸ್‌ಐಗಳಿಗೆ ₹75 ಸಾವಿರ ದಂಡ ವಿಧಿಸಿದ ಮಾಹಿತಿ ಹಕ್ಕು ಆಯೋಗ

ಸಿರವಾರ: ‘ಮಾಹಿತಿ ಹಕ್ಕು ಕಾಯ್ದೆಯಡಿ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೀಡಲು ಕೋರಿ ಸಲ್ಲಿಸಿದ ಅರ್ಜಿಗೆ ಉತ್ತರ ನೀಡಲು ಹಿಂದೇಟು ಹಾಕಿದ್ದ ಸಿರವಾರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೂವರು ಪಿಎಸ್‌ಐಗಳಿಗೆ ಮಾಹಿತಿ ಹಕ್ಕು ಆಯೋಗದ ಕಲುಬುರಗಿ […]

ಸುದ್ದಿ

ನ್ಯಾಯಮೂರ್ತಿಗಳ ಬಗ್ಗೆ ಹಗುರವಾಗಿ ಮಾತನಾಡವುದು ಸಲ್ಲದು: – ನ್ಯಾ.ಕೃಷ್ಣ ಎಸ್.ದೀಕ್ಷಿತ್

ಬೆಂಗಳೂರು: ಪ್ರಕರಣವೊಂದರ ಕಲಾಪದ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು, ನ್ಯಾಯಮೂರ್ತಿಗಳಿಗೆ ರಜೆಯ ಅವಕಾಶಗಳು ಹೆಚ್ಚು. ರಜಾದಿನಗಳನ್ನು ಅವರು ಆರಾಮದಾಯಕವಾಗಿ ಕಳೆಯುತ್ತಾರೆ ಎಂದು ಭಾವಿಸುತ್ತಾರೆ. ಇಂತಹ ತಪ್ಪು ಕಲ್ಪನೆ ಇರಬಾರದು. ನ್ಯಾಯಮೂರ್ತಿಗಳ ಬಗ್ಗೆ […]

ಸುದ್ದಿ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಶಿಕ್ಷಕನಿಗೆ 111 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋಟ್೯!

ತಿರುವನಂತಪುರ: ಟ್ಯೂಷನ್ ಗೆ ಹೋಗಿದ್ದ ವೇಳೆ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ತಿರುವನಂತಪುರದ ವಿಶೇಷ ತ್ವರಿತ ನ್ಯಾಯಾಲಯ 111 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.05 ಲಕ್ಷ ರೂ.ದಂಡ […]

You cannot copy content of this page